#Shabarimala

Cethana MuniswamygowdaRiyaindia
2024-12-04

ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯು ಬೆಂಗಳೂರು ಮತ್ತು ಕೇರಳದ ಪಂಪಾ ನಡುವೆ ಐರಾವತ ವೋಲ್ವೊ ಬಸ್‌ ಸೇವೆ ಆರಂಭಿಸಿದೆ.

ಶಾಂತಿ ನಗರ ಬಸ್‌ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ವೋಲ್ವೊ ಬಸ್‌ ಹೊರಡಲಿದೆ. ಮೈಸೂರು ರಸ್ತೆ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಿಂದ 2.20ಕ್ಕೆ ಹೊರಟು ಸಂಜೆ 5.10ಕ್ಕೆ ಮೈಸೂರು ತಲುಪಲಿದೆ. ಮರುದಿನ ಬೆಳಗ್ಗೆ 6.45ಕ್ಕೆ ನಿಲಕ್ಕಲ್‌ ಬಸ್‌ ನಿಲ್ದಾಣವನ್ನು ತಲುಪಲಿದೆ.

ಹೋಗುವಾಗ ಪಂಪಾದಲ್ಲಿ ಇಳಿಯುವ ಅವಕಾಶ ನೀಡಲಾಗಿದ್ದು, ಬರುವಾಗ ನಿಲಕ್ಕಲ್‌ ಬಸ್‌ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಪ್ರತಿದಿನ ಸಂಜೆ 6ಕ್ಕೆ ನಿಲಕ್ಕಲ್‌ನಿಂದ ವೋಲ್ವೊ ಬಸ್‌ ಹೊರಡಲಿದ್ದು, ಮರುದಿನ ಬೆಳಗ್ಗೆ 10ಕ್ಕೆ ಮೆಜೆಸ್ಟಿಕ್‌ ತಲುಪಲಿದೆ.

ನಿಮ್ಮ ಹತ್ತಿರದ ಖಾಸಗಿ ಟಿಕೆಟ್‌ ಕೌಂಟರ್‌ಗಳಲ್ಲದೆ, ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಬುಕ್ಕಿಂಗ್‌ ಕೌಂಟರ್‌ಗಳಲ್ಲಿ ಟಿಕೆಟ್‌ ಕಾಯ್ದಿರಿಸಬಹುದು. ವೆಬ್‌ಸೈಟ್‌ ksrtc.in/ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು.

Client Info

Server: https://mastodon.social
Version: 2025.04
Repository: https://github.com/cyevgeniy/lmst